ಪ್ರತಿಷ್ಠಾನ ಸ್ಥಾಪಿತವಾದ ಬಗೆ

3944613

ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನವು ಸಂಸ್ಕಾರಯುಕ್ತ ಸಮಾಜ ನಿರ್ಮಾಣವನ್ನು ಮಾಡುವ ಬೃಹತ್ ಕನಸನ್ನು ಹೊಂದಿ ದಿನಾಂಕ 11 ನವೆಂಬರ್ 2016 ರಂದು ಹರಿಹರ ನಗರದಲ್ಲಿ ಕಾನೂನಿನ ಎಲ್ಲ ನಿಯಮಗಳನ್ನ ಅನುಸರಿಸಿ ಪ್ರತಿಷ್ಠಾನವು ಪ್ರಾರಂಭವಾಯಿತು.

ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಹಸಿವು ಮುಕ್ತ ಹಾಗೂ ಜ್ಞಾನಯುಕ್ತ

ಸಮಾಜವನ್ನು ಕಟ್ಟಲು ನಮ್ಮ ಪ್ರತಿಷ್ಠಾನ ಮುಂದಾಗಿದೆ

"ನೊಂದ ಎಲ್ಲ ಜೀವ ನನ್ನದೆಂಬ ಭಾವ"

 ಎಂಬ ಭಾವನೆಯಲ್ಲಿ ಇನ್ನೂ ಅನೇಕ ಜನ ಪರ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಇದಕ್ಕೆ ಮಹಾ ಸನ್ನಿಧಿಯವರ ಕಾರುಣ್ಯ ದೃಷ್ಟಿ  ಪೂಜ್ಯ ಶ್ರೀ ಅವಧೂತ ಕವಿ ಗುರುರಾಜ ಗುರೂಜಿ ಅವರ ಮಾರ್ಗದರ್ಶನ ಹಾಗೂ ಎಲ್ಲಾ ಪದಾಧಿಕಾರಿಗಳ ಅವಿರತಶ್ರಮ ಕಾರಣವಾಗಿದೆ

ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ ವತಿಯಿಂದ ನಡೆದ ಸಮಾಜೋದ್ಧಾರ್ಮಿಕ ಕಾರ್ಯಕ್ರಮಗಳು

  • ಲೋಕಕಲ್ಯಾಣಾರ್ಥವಾಗಿ ಪರಮ ಪೂಜ್ಯ ಗುರೂಜಿ ಅವರು ಕೈಗೊಂಡ ಅಥರ್ವಣ ತಂತ್ರ ಯುಕ್ತ ಮಹಾ ಅನುಷ್ಠಾನ ಮತ್ತು ಪ್ರತ್ಯಂಗಿರಾ ಭದ್ರಕಾಳಿ ಹೋಮ
  •  ನಂಬಿಕೆಯ ಬದುಕಿಗೆ ಬೆಚ್ಚನೆಯ ಹೊದಿಕೆ
  •  ಹಸಿರೇ ಉಸಿರು
  •  “ಅನ್ನ ವೃದ್ಧಿ ಬದುಕು ಸಮೃದ್ಧಿ”
  •  ವಿಭೂತಿ ಧಾರಣೆ ಪಾಪ ನಿವಾರಣೆ
  •  ಸಾವಿರ ವೃಕ್ಷ ಪ್ರಕೃತಿ ಸುಭಿಕ್ಷ
  •  ನಾಮ ಲಿಖಿತ ಜಪ ಅಭಿಯಾನ
  •  ಅನಾಥಾಶ್ರಮ  ವೃದ್ಧಾಶ್ರಮಗಳಿಗೆ ಆಹಾರ ವಿತರಣೆ
  •  ರಕ್ತದಾನ ಶಿಬಿರ
  •  ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆ
  •  ಬೃಹತ್ ಆರೋಗ್ಯ ಶಿಬಿರ
  •  ಭಗವದ್ಗೀತೆಯ ಸಾರ ಜೀವನ ಸಾಕ್ಷಾತ್ಕಾರ
  •  ವೈದವ್ಯ ಸ್ತ್ರೀಯರಿಗೆ ಸುಮಂಗಲಿಯ ಬಾಗಿನ
  •  ರುದ್ರಾಕ್ಷಿ ಧಾರಣೆ ಸಂಸ್ಕಾರ ಪಾಲನೆ
  •  ಅಗ್ನಿಹೋತ್ರ ಅಭಿಯಾನ 
  • “ಪ್ರತಿಷ್ಠಾನದ ಪ್ರತಿಷ್ಠೆ”  ನಮ್ಮ ತಾಯಂದಿರು ಅಭಿಯಾನ
  • “ಶಾಂತಿ ಧಾಮ” ವೃದ್ಧಾಶ್ರಮಕ್ಕೆ ಗಣೇಶ ಮೂರ್ತಿ ಕೊಡುಗೆ.

  • ಶ್ರೀ ಗಜಾನನ ಯುವಕ ಮಂಡಳಿ ಸಂಯೋಗದಲ್ಲಿ ರುದ್ರಾಭಿಷೇಕ ಮಹಾಪೂಜೆ.
  • ಶ್ರೀ ಗಜಾನನ ಯುವಕ ಮಂಡಳಿ ಸಂಯೋಗದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ.
  • ಶ್ರೀ ಗಜಾನನ ಯುವಕ ಮಂಡಳಿ ಸಂಯೋಗದಲ್ಲಿ ಸುಮಂಗಲಿಯರಿಗೆ ಉಡಿತುಂಬುವ ಕಾರ್ಯಕ್ರಮ.
  • ಶ್ರೀ ಗಜಾನನ ಯುವಕ ಮಂಡಳಿ ಸಂಯೋಗದಲ್ಲಿ ಗಣ ಹೋಮ ಪೂಜೆ.
  • ಬುದ್ದಿ ಮಾಂದ್ಯ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ.
  • ಅನ್ನ ವೃದ್ಧಿ ಬದುಕು ಸಮೃದ್ಧಿ” ಅಭಿಯಾನ
  • ಕಾರ್ತಿಕ ಮಾಸದ 12 ದಿನಗಳ ಅಥರ್ವಣ ತಂತ್ರಯುಕ್ತ ಮಹಾ ಅನುಷ್ಠಾನ ಕಾರ್ಯಕ್ರಮ
  • ಕಾರ್ತಿಕ ಮಾಸದ ಅನುಷ್ಠಾನದ ಕೊನೆಯ ದಿನದ ಮಂಗಳ ಕಾರ್ಯಕ್ರಮ
  • ಪ್ರತಿ ಮಂಗಳವಾರ ಪೂಜಾ ಕೈಂಕರ್ಯಗಳು ಹಾಗೂ ಪ್ರತಿಷ್ಠಾನದ ವತಿಯಿಂದ ದಾಸೋಹವ್ಯವಸ್ಥೆ.

  • ಲಕ್ಷ್ಮೇಶ್ವರ ನಗರದ ಸುತ್ತಮುತ್ತಲಿನ ಸುಕ್ಷೇತ್ರಗಳಿಗೆ ಉಚಿತವಾಗಿ ಬೆಲ್ಲದ ವಿತರಣೆ
  • ಖಡ್ಗ ತೀರ್ಥ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅಡುಗೆ ದಿನಸಿ ಪದಾರ್ಥಗಳನ್ನು ಉಚಿತವಾಗಿ ನೀಡಲಾಯಿತು
  • “ಪಾವನ ಜೀವನಕ್ಕೆ ಪರಶಿವನ ಮಹಾಮಂತ್ರ” ಅಭಿಯಾನ
  • ಪ್ರತಿಷ್ಠಾನದ ಹಾಗೂ ಅವನಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಹರಿಹರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ
  • “ಸ್ತ್ರೀ ನಿತ್ಯ ಸುಮಂಗಲೆ ಸದಾ ಸರ್ವ ಮಂಗಲೆ” ಅಭಿಯಾನ
  • 21 ಶುಕ್ರವಾರ ಕಳಸ ಗ್ರಾಮದ ದ್ಯಾಮವ್ವ ದೇವಿಗೆ ಕುಂಕುಮಾರ್ಚನೆ ಸೇವೆ ಹಾಗೂ ದಾಸೋಹ ವ್ಯವಸ್ಥೆ
  • ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆಯ ಅಂಗವಾಗಿ ಪೂಜ್ಯ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ವಿವಿಧ ಪೂಜೆ ಹಾಗೂ ಹೋಮ
  •  ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸಭಾ ಕಾರ್ಯಕ್ರಮ